•  
  •  
  •  
  •  
Index   ವಚನ - 1198    Search  
 
ದೇವನಿಂತವನೆಂದು ನಂಬಲಾಗದಯ್ಯಾ: ಬಾ ಎಂದು ಹೇಳಿ ಬಯಲಾದ ದೇವನೊಳ್ಳಿದನೆ? ದೇವನಿಂತವನೆಂದು ನಂಬಲಾಗದಯ್ಯಾ: ತನ್ನ ಕಾರ್ಯಕ್ಕೆ ಹೆಣಗಾಡಿಸಿದವ ಒಳ್ಳಿದನೆ? ಕಪಿಲಸಿದ್ಧಮಲ್ಲಯ್ಯಾ, ನಿನ್ನ ಲೀಲೆ ತಿಳಿಯದಾರಿಂಗೂ.
Transliteration Dēvanintavanendu nambalāgadayyā: Bā endu hēḷi bayalāda dēvanoḷḷidane? Dēvanintavanendu nambalāgadaya: Tanna kāryakke heṇagāḍisidava oḷḷidane? Kapilasid'dhamallayya, ninna līle tiḷiyadāriṅgū.