ವಚನ - 1199     
 
ಮಾಡಿ ಮಾಡಿ ಹೋದರು ಕೆಲಬರು. ನೋಡಿ ನೋಡಿ ಹೋದರು ಹಲಬರು. ನೀಡಿ ನೀಡಿ ಹೋದರು ಕೆಲಬರು. ನೀಡದೆ ನೋಡದೆ ಮಾಡದೆ ಹೋದವರಾರನೂ ಕಾಣೆ ನಿಮ್ಮ ಹೃದಯದೊಳು [ಕಪಿಲಸಿದ್ಧ]ಮಲ್ಲಯ್ಯಾ.