ಮಾದಾರನಲ್ಲಿ ಉಂಡ ಶಿವನು;
ನೀವೇಕೆ ಉಣ್ಣಿಸರಿ ಎಂದು ಕೇಳಿದಡೆ.
ಕೊಡುವೆನುತ್ತರವ, ಕೇಳಿರೆಲೆ ಮನುಜರಿರಾ.
ಮಾದಾರನಲ್ಲುಂಡ, ಶಿವನು ಮೇದಾರನಲ್ಲಿಗೆ ಬಂದಲ್ಲಿ,
ರೂಪಳಿದು ರೂಪಾಗಿ ಬಾ ಎಂದನಲ್ಲದೆ,
ಸಮರಸ ಮಾಡಲಿಲ್ಲವು.
ಮೇದಾರನಲ್ಲುಂಡು, ಮಾದಾರನ ಮನೆಗೆ ಬಂದಡೆ,
ರೂಪಳಿದು ರೂಪಾಗಿ ಬಾ ಎಂದನಂದು ಚೆನ್ನನು.
ಶಬ್ದಸೂತಕ ಶರಣರಿಗಲ್ಲದೆ ಸೂತಕರಿಗೆಲ್ಲಿಹದೋ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mādāranalli uṇḍa śivanu;
nīvēke uṇṇisari endu kēḷidaḍe.
Koḍuvenuttarava, kēḷirele manujarirā.
Mādāranalluṇḍa, śivanu mēdāranallige bandalli,
rūpaḷidu rūpāgi bā endanallade,
samarasa māḍalilla.
Mēdāranalluṇḍu, mādārana manege bandaḍe,
rūpaḷidu rūpāgi bā endanandu cennanu.
Śabdasūtaka śaraṇarigallade sūtakarigellihadō
kapilasid'dhamallikārjunā.