Index   ವಚನ - 169    Search  
 
ಕೀಡಿ ತುಂಬಿಯ ಹಂಬಲದಿಂದ ತುಂಬಿಯಾಗಿ ತನ್ನ ಬಿಡಲುಂಟೆ ಅಯ್ಯಾ? ಆನು ನಿಮ್ಮ ನೆನೆದು ಎನ್ನ ಕರತುಂಬಿ, ಎನ್ನ ಮನತುಂಬಿ, ಎನ್ನ ಭಾವತುಂಬಿ ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯಾ ಚೆನ್ನಮಲ್ಲಿಕಾರ್ಜುನಾ.