ವಚನ - 168     
 
ಕಿರಿಯರಹುದರಿದಲ್ಲದೆ, ಹಿರಿಯರಹುದರಿದಲ್ಲ ನೋಡಾ! [ಭವಿಯಹುದರಿದಲ್ಲದೆ] ಭಕ್ತನಹುದರಿದಲ್ಲ ನೋಡಾ. ಕುರುಹಹುದರಿದಲ್ಲದೆ, ನಿರಾಳವಹುದರಿದಲ್ಲ ಚೆನ್ನಮಲ್ಲಿಕಾರ್ಜುನಯ್ಯಾ?