•  
  •  
  •  
  •  
Index   ವಚನ - 1358    Search  
 
ವಿವೇಕವೆಂಬುದು ಬೇರಿಲ್ಲ ಕಂಡಯ್ಯಾ, ನವನಾಳದ ಸುಳುಹ ತೊಡೆದು ಸುನಾಳವ ಶುದ್ಧವ ಮಾಡುವೆ. ಅಷ್ಟದಳ ಕಮಲವನು ಊರ್ಧ್ವಮುಖವಾಗಿ ನಿಜಪದದಲ್ಲಿ ನಿಲ್ಲಿಸುವೆ. ಐವತ್ತೆರಡಕ್ಷರವ ತಿಳಿದು ನೋಡಿ ಏಕಾಕ್ಷರದಲ್ಲಿ ನಿಲ್ಲಿಸುವೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ವಿಚಾರದ ಹವಣ ನೀನೆ ಬಲ್ಲೆ.
Transliteration Vivēkavembudu bērilla kaṇḍayya, navanāḷada suḷuha toḍedu sunāḷava śud'dhava māḍuve. Aṣṭadaḷa kamalavanu endudhvamukhavāgi nijapadadalli nillisuve. Aivatteraḍakṣarava tiḷidu nōḍi ēkākṣaradalli nillisuve. Kapilasid'dhamallikārjunā, enna vicārada havaṇa nīne balle.