ವಚನ - 1359     
 
ಅಂತರಂಗದಲ್ಲಿ ನಿಮ್ಮ ನೋಡುವನಲ್ಲ, ಕೇಳು ಕಂಡಾ, ಎಲೆ ಅಯ್ಯಾ. ಬಹಿರಂಗದಲ್ಲಿ ಬಳಸುವನಲ್ಲ, ಕೇಳು ಕಂಡಾ, ಎಲೆ ಅಯ್ಯಾ. ಸುಷುಮ್ನದ ಬಟ್ಟೆಯ ತುದಿಯನಡರಿ, ಸಾವಿರ ದಳದ ಮಂಟಪದಲ್ಲಿ ನಿಮ್ಮ ನೆಲೆಗಂಡಿಪ್ಪ ನೋಡಾ, ಕಪಿಲಸಿದ್ಧಮಲ್ಲಿನಾಥಯ್ಯಾ.