•  
  •  
  •  
  •  
Index   ವಚನ - 1474    Search  
 
ಬಂದಲ್ಲುಪಚರಿಸುವುದಲ್ಲದೆ, ನಿಂದ ನಿಂದುಲ್ಲುಪಚರಿಸುವುದು ಭಕ್ತಿಯ ಕೊಂಕು ನೋಡಯ್ಯಾ. ಉಪಚಾರಕ್ಕೆ ಬಂದಾತ ಜಂಗಮನಲ್ಲ ನೋಡಯ್ಯಾ; ಉಪಚರಿಸಿದವ ಭಕ್ತನಲ್ಲ. ಅನುಭವಕ್ಕೆ ಬಂದಿಹನಯ್ಯಾ ಜಂಗಮನು, ಅನುಭವಕ್ಕೆ ಮಾಡುವನಯ್ಯಾ ಉಪಚಾರವ ಭಕ್ತನು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bandallupacarisuvudallade, nindu nindullupacarisuvudu bhaktiya koṅku nōḍayya. Upacārakke bandāta jaṅgamanalla nōḍayya; upacarisidava bhaktanalla. Anubhavakke bandihanayyā jaṅgamanu, anubhavakke māḍuvanayyā upacārava bhaktanu, ele kapilasid'dhamallikārjunā.