•  
  •  
  •  
  •  
Index   ವಚನ - 1479    Search  
 
ಸಾಕ್ಷಿಯೆಂಬುದೆಲ್ಲ ವೃತ್ತಿಯಲ್ಲಲ್ಲದೆ, ನಿವೃತ್ತಿಯಲ್ಲಿಹುದೇನಯ್ಯಾ? ರುಚಿಯೆಂಬುದು ಪದಾರ್ಥದಲ್ಲಲ್ಲದೆ, ನಿಷ್ಪದಾರ್ಥದಲ್ಲಿಹುದೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sākṣiyembudella vr̥ttiyallallade, nivr̥ttiyallihudēnayyā? Ruciyembudu padārthavallade, niṣpadārthadallihude ayyā, kapilasid'dhamallikārjunā.