ಗುಣ ನೋಡುವಡೆ ಕೀಳು
ಗುಣವಯ್ಯಾ ಧೇನುವಿನಲ್ಲಿ.
ನಿಂದಿಸುವ, ಬಂದ ಭಕ್ತರ
ಹಾದು ಹೋಗುವ ಕುಂದುವಡೆಯದೆ,
ಮಲತ್ರಯ ಪೊಂದದ
ಸಚ್ಚಿದಾನಂದ ಗುಣವುಂಟಯ್ಯಾ
ಮಹೇಶನಲ್ಲಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guṇa nōḍuvaḍe kīḷu
guṇavayya dhēnuvinalli.
Nindisuva, banda bhaktara
hādu hōguva kunduvaḍeyade,
malatraya pondada
saccidānanda guṇavuṇṭayya
mahēśanalli nōḍā,
kapilasid'dhamallikārjunā.