•  
  •  
  •  
  •  
Index   ವಚನ - 1610    Search  
 
ಮಹೇಶನಾದೆನೆಂಬ ಬಿಂಕವು ಮನದರುಹಿನಲ್ಲಿ ಅಡಗಿರಬೇಕು. ಭಕ್ತನಾದೆನೆಂಬ ಬಿಂಕವು ಸೈರಣೆಯ ರೂಹಿನಲ್ಲಿ ಮನೆಮಾಡಿಕೊಂಡಿರಬೇಕು. ಮಹೇಶನಾದವ ಒಬ್ಬನು ತೋರಲಿಲ್ಲ; ಭಕ್ತನಾದವನ ಅಂದಂದಿಗೆ ನೋಡಲಿಲ್ಲ ಕಂಡೆಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mahēśanādenemba biṅkavu manadaruhinalli aḍagirabēku. Bhaktanādenemba biṅkavu sairaṇeya rūhinalli manemāḍirabēku. Mahēśanādava obbanu tōralilla; bhaktanādavana andandige nōḍalilla kaṇḍeyā, kapilasid'dhamallikārjunā.