ಮುಳುಗುವಾತ ಮುಳುಗುವವನೆತ್ತಬಲ್ಲನೆ?
ತಾ ಮಾಯೆಯೊಳಗಾಗಿ,
ಮಾಯಿಕರ ತನ್ನ ಪಾದಾಂಬುವಿಂ ಪರಿಹರಿಪೆನೆಂಬವ
ತೆಗೆದುಕೊಂಬವ
ಇವರೀರ್ವರೂ ಮುಳುಗಿ
ಯಮಪಾಶಕ್ಕೊಳಗಾದರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Muḷuguvudu muḷuguvavanettaballane?
Tā māyeyoḷagāgi,
māyikara tanna pādāmbuviṁ pariharipenembava
tegedukombava
ivarīrvarū muḷugi
yamapāśakkoḷagādaru nōḍā,
kapilasid'dhamallikārjunā.