ವಚನ - 1631     
 
ಬೀಜವೊಂದರಲ್ಲಿ ಐದು ಬೀಜಂಗಳ ಕಂಡೆ. ಐದನೆಯ ಬೀಜದಿಂದಾರಯ್ಯಲು ಬೀಜವೊಂದೆ ಕಂಡೆ. ಮತ್ತೈದನೆಯ ಬೀಜದಿಂದಾರಯ್ಯಲು ಐದು ಬೀಜವ ಕಂಡೆ. ಇದರಂದವನರುಹಾ, ಕಪಿಲಸಿದ್ಧಮಲ್ಲಿಕಾರ್ಜುನಾ.