ವಚನ - 1643     
 
ನಿರ್ಮಲ ಕರ್ಮವದು ಸದ್ಗತಿಗೆ ಸಾಧನ ನೋಡಾ. ನಿರ್ಮಲ ಕರ್ಮವದು ಜ್ಞಾನಕ್ಕೆ ವರ್ಧನ ನೋಡಾ. ನಿರ್ಮಲ ಕರ್ಮವದು ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವ ಕೂಟ ನೋಡಾ.