ಅರಿಷಡ್ವರ್ಗಂಗಳಳಿದವ ಶರಣನೆಂಬರು;
ಅದೆಂತಯ್ಯಾ?
ಕಾಮವದು ಲಿಂಗಾರ್ಚನೆಯಲ್ಲಿ;
ಕ್ರೋಧವದು ಷಣ್ಮತನಾಶದಲ್ಲಿ;
ಲೋಭವದು ಸಮ್ಯಗ್‍ಜ್ಞಾನದಲ್ಲಿ;
ಮೋಹವದು ಮುಕ್ತ್ಯಂಗನೆಯಲ್ಲಿ;
ಮದವದು [ದ] ಮನದಲ್ಲಿ;
ಮತ್ಸರವದು ಶಮನದಲ್ಲಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ariṣaḍvargaṅgaḷaḷidava śaraṇanembaru;
adēntayyā?
Kāmavadu liṅgārcaneyalli;
krōdhavadu ṣaṇmatanāśadalli;
lōbhavadu samyagnajñānadalli;
mōhavadu muktyaṅganeyalli;
madavadu [da] manadalli;
matsaravadu śamanadalli nōḍā,
kapilasid'dhamallikārjunā.