ಜೀವೇಶ್ವರಗಾಶ್ರಯವಾದ ಸೂಕ್ಷ್ಮ ದೇಹಮಧ್ಯದಲ್ಲಿ
ಷಟ್‍ಚಕ್ರಂಗಳಲ್ಲಿ ಹುಟ್ಟಿರ್ದ ಷಟ್ಕಮಲಂಗಳನು
ಆಧಾರ ತೊಡಗಿ ಆಜ್ಞಾಚಕ್ರವೇ ಕಡೆಯಾಗುಳ್ಳ
ಬ್ರಹ್ಮಾದಿಗಳ ಸ್ಥಾನಂಗಳ ಗುರೂಪದೇಶದಿಂದೆ ಭಾವಿಸುವುದು.
ಆಜ್ಞಾಚಕ್ರದತ್ತಣಿಂದೆ ಊರ್ಧ್ವ ಭಾಗವಾದ
ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ
ಸಹಸ್ರದಳ ಕಮಲವನು ಭಾವಿಸುವುದು.
ಆ ಸಹಸ್ರದಳ ಕಮಲದಲ್ಲಿ ನಿರ್ಮಲವಾದ
ಚಂದ್ರಮಂಡಲವನು ಧ್ಯಾನಿಸುವುದು.
ಆ ಚಂದ್ರಮಂಡಲದ ಮಧ್ಯದಲ್ಲಿ
ವಾಲಾಗ್ರ ಮಾತ್ರದೋಪಾದಿಯಲ್ಲಿ
ಪರಮ ಸೂಕ್ಷ್ಮರಂಧ್ರವನು ಉಪದೇಶದಿಂದರಿವುದು.
ಆ ಸೂಕ್ಷ್ಮ ರಂಧ್ರವನೆ ಕೈಲಾಸಸ್ಥಾನವಾಗಿ ಅರಿದು
ಆ ಕೈಲಾಸದಲ್ಲಿ ಇರುತಿರ್ದ ಪರಮೇಶ್ವರನನು
ಸಮಸ್ತ ಕಾರಣಂಗಳಿಗೆ ಕಾರಣವಾಗಿದ್ದಾತನಾಗಿ
ಧ್ಯಾನಿಸುವುದಯ್ಯಾ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
Hindi Translationजीवेश्वर का आश्रय बने सूक्ष्म देह मध्य में
षट्चक्रों में जन्मे षट्कर्म लोगों को
आधार बनकर आज्ञाचक्र ही अंतिम होकर
ब्रह्मादि स्थानों को गुरूपदेश से ही समझना।
आज्ञाचक्र से उस पार ऊर्ध्व भाग का
ब्रह्मरंध्र में हुए हो तो
उस सहस्र दल कमल समझना |
उस सहस्र दल कमल में निर्मल
चंद्रमंडल का ध्यान करना।
उस चंद्रमंडल के मध्य में वालाग्र मात्र के जैसे
परम सूक्ष्म रंध्र को उपदेश से जानना।
उस सूक्ष्म रंध्र को ही कैलास स्थान जानकर
उस कैलास में स्थित परमेश्वर को
समस्त कारण केलिए कारण बनने से
ध्यान करना है अय्या चेन्नमल्लिकार्जुनदेवा।
Translated by: Eswara Sharma M and Govindarao B N
English TranslationTranslated by: Dr. Sarojini Shintri
Tamil TranslationTranslated by: Smt. Kalyani Venkataraman, Chennai
Marathi Translation
Malayalam Translation
Russian TranslationTranslated by: Prof Harishankar, Mysore and Mrs. Galina Kopeliovich, Russia