Index   ವಚನ - 1714    Search  
 
ಶರಣನ ಕೂಡೆ ವಾದ ಸಲ್ಲದು ಸಲ್ಲದು ನೋಡಾ. ಆತನ ನಡೆ ಬೇರೆ, ಆತನ ನುಡಿಗಡಣ ಬೇರೆ. ಕ್ರಿಯೆವಿಡಿದು ಆಚರಿಸಿದಲ್ಲಿ [ಜ್ಞಾನವಿಡಿದು ವಾದಿಸುವ]; ಜ್ಞಾನವಿಡಿದು ಆಚರಿಸಿದಲ್ಲಿ ಕ್ರಿಯೆವಿಡಿದು ವಾದಿಸುವ. ನಿರ್ದ್ವಂದ್ವನಾಗಿ ನಿಂದಲ್ಲಿ ತೋರಿದ ಕಪಿಲಸಿದ್ಧಮಲ್ಲಿಕಾರ್ಜುನನೆಂದು ಡಂಗುರಹೊಯ್ದು ನಾಟ್ಯವಾಡುವ.