ನಾ ಮಾಡಿದ ಪೂಜಾಫಲ ಅಂತಿಂತಲ್ಲ.
ಬಾಣ ಪೂಜಿಸಿದ ಫಲ ಬಾಗಿಲ ಕಾಯ್ದಲ್ಲಿ ಹೋಯಿತ್ತು.
ಮಯೂರ ಪೂಜಿಸಿದ ಫಲ ವಿದ್ಯಾದಾನದಲ್ಲಿ ಹೋಯಿತ್ತು.
ಹನುಮಂತ ಪೂಜಿಸಿದ ಫಲ ವಜ್ರ ದೇಹದಲ್ಲಿ ಹೋಯಿತ್ತು.
ನಾ ಪೂಜಿಸಿದ ಫಲ ಕೊಟ್ಟು ಕೊಟ್ಟು ತೀರದೆ ನಿಂದಿತ್ತು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nā māḍida pūjāphala antintalla.
Bāṇa pūjisida phala bāgila kāydalli hōyittu.
Mayūra pūjisida phala vidyādānadalli hōyittu.
Hanumanta pūjisida phala vajra dēhadalli hōyittu.
Nā pūjisida phala koṭṭu koṭṭu tīrade nindittu
nōḍā, kapilasid'dhamallikārjunā.