ವಚನ - 1744     
 
ಶರಣನ ಪೂಜೆಯದು ಮರಣದ ಕೇಡು ನೋಡಿರಯ್ಯಾ. ಶರಣನ ಪೂಜೆಯದು ಶಿವನ ಕರುಣಾರಸ ನೋಡಿರಯ್ಯಾ. ಶರಣನ ಪೂಜೆಯದು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆ ನೋಡಿರಯ್ಯಾ.