Index   ವಚನ - 215    Search  
 
ತನುವನೆಲ್ಲವ ಜರಿದು ಮನವ ನಿಮ್ಮೊಳಗಿರಿಸಿ, ಘನಸುಖದಲೋಲಾಡುವ ಪರಿಯ ತೋರಯ್ಯಾ ಎನಗೆ. ಭಾವವಿಲ್ಲದ ಬಯಲಸುಖವು ಭಾವಿಸಿದಡೆಂತಹುದು ಬಹುಮುಖರುಗಳಿಗೆ? ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವಾ ನಾನಳಿದು ನೀನುಳಿದ ಪರಿಯ ತೋರಯ್ಯಾ ಪ್ರಭುವೆ.