ವಚನ - 219     
 
ತನುವಿಡಿದ ಇಂದ್ರಿಯಸುಖ ಸಿರಿಯಂತೆ ತೋರಿ ಅಡಗುತ್ತಲಿದೆ. ಗಗನದೊಡ್ಡಣೆಯಂತೆ ತನು; ನೋಡ ನೋಡಲನುಮಾನವಿಲ್ಲದೆ ಹರಿದು ಹೋಗುತ್ತದೆ. ಇವಾದಿಯ ಮಾಣಿಸಿ, ನಿಮ್ಮ ಘನನೆನಹಿನೊಳಿರಿಸಾ ಚೆನ್ನಮಲ್ಲಿಕಾರ್ಜುನಯ್ಯಾ.