ವಚನ - 1811     
 
ಅಕಾರಪ್ರಣವದಿಂದ ಸ್ಥೂಲದೇಹ ದಗ್ಧವಾಯಿತ್ತು; ಉಕಾರಪ್ರಣವದಿಂದ ಸ್ಥೂಲದೇಹ ನಿರ್ಮಲವಾಯಿತ್ತು; ಮಕಾರಪ್ರಣವದಿಂದ ಕಾರಣದೇಹ ಕರ್ಮ [ಬೀಜ]ವಳಿಯಿತ್ತು. ಅಕಾರದಲ್ಲಿ ಜಾಗ್ರತಿ, ಉಕಾರದಲ್ಲಿ ಸ್ವಪ್ನ [ಮಕಾರದಲ್ಲಿ ಸುಷುಪ್ತಿ]. [ಜಾಗ್ರ] ಸ್ವಪ್ನದಲ್ಲಿ ರೂಹು ಸುಷುಪ್ತಿಯ[ಲ್ಲಿ]ಲ್ಲ. ತ್ರಿವಿಧಾವಸ್ಥೆಯಲ್ಲೊಂದಾಗದ ಮಾತ್ರ ಪ್ರಾಣಲಿಂಗಿ ಆತನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.