•  
  •  
  •  
  •  
Index   ವಚನ - 1812    Search  
 
ದೇಹ ಎರಡರಲ್ಲಿ ಭಾವ ಒಂದಾಗದವ ಪ್ರಾಣಲಿಂಗಿಯಲ್ಲ. ದೇಹ ಮೂರರಲ್ಲಿ ಸಾಕ್ಷಿ ತಾನಾಗದವ ಪ್ರಾಣಲಿಂಗಿಯಲ್ಲ. ದೇಹ ನಾಲ್ಕರಲ್ಲಿ ನಿರ್ದ್ವಂದ್ವ ಅಸಾಕ್ಷಿಕ ತಾನಾಗದವ ಪ್ರಾಣಲಿಂಗಿಯಲ್ಲ. ಈ ಛಂದವ [ನು ಅ]ನಿಂದೆಯೆಂದೆನಾಗಿ. ಚೆನ್ನಬಸವನ ಗುರುಮೂರ್ತಿಯಿಂದ, ಆತನ ಒಕ್ಕುದ ಮಿಕ್ಕುದ ಕಾಯ್ದುಕೊಂಡಿಪ್ಪಾತನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Dēha eraḍaralli bhāva ondāgadava prāṇaliṅgiyalla. Dēha mūraralli sākṣi tānāgadava prāṇaliṅgiyalla. Dēha nālkaralli nirdvandva asākṣika tānāgadava prāṇaliṅgiyalla. Ī chandava [nu a]nindeyendenāgi. Cennabasavana gurumūrtiyinda, ātana okkuda mikkuda kāydukoṇḍippatana pādakke namō namō embenayyā, kapilasid'dhamallikārjunayya.