ಪುಣ್ಯದ ಬಲಿಯದು ಪಾಪದಲ್ಲಿ ಪುಣ್ಯ ಬಲಿಯೆ ನೋಡಯ್ಯಾ.
ಪಾಪದ ಬಲಿಯದು ಪುಣ್ಯದಲ್ಲಿ ಪಾಪ ಬಲಿಯೆ ನೋಡಯ್ಯಾ.
ನಾಗನ ಸ್ವಭಾವವೆ ವಿಷ; ಮಧ್ಯಕ್ಷೀರ ಕ್ಷೀರವಾಗದು,
ವಿಷವೆ ಸಹಜ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Puṇyada baliyadu pāpadalli puṇya baliye nōḍayyā.
Pāpada baliyadu puṇyadalli pāpa baliye nōḍayya.
Nāgana svabhāvave viṣa; madhyakṣīra kṣīravāgadu,
viṣave sahaja nōḍayya, kapilasid'dhamallikārjunā.