•  
  •  
  •  
  •  
Index   ವಚನ - 1823    Search  
 
ಯಾವಾದರೂ ತೀರ್ಗಡೆಯಂತ್ಯದಲ್ಲಿ ಜಪ ತಪ ಶಿವಾರಾಧನೆ ಫಲಪದವು. ತೀರ್ಗಡೆಯಾ[ಗ]ದಲ್ಲಿ ಫಲಿಸದು ಫಲಿಸದು ಪುಣ್ಯಪಾಪಗಳವು. ದೇಹಶುದ್ಧವಾದವಂಗೆ ರಸಸಿದ್ಧಿ ರಸಸಿದ್ಧಿಯಾದವಂಗೆ ದೇಹಶುದ್ಧಿ ದೇಹಶುದ್ಧವಿಲ್ಲದವಂಗೆ ರಸಸಿದ್ಧಿಯಾಗದು; ರೋಗ ಪರಿಹಾರ[ವಾಗದು] ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Yāvādarū tīrgaḍeyantyadalli japa tapa śivārādhane phalapadavu. Tīrgaḍeyā[ga]dalli phalisadu phalisadu puṇyapāpagaḷu. Dēhaśud'dhavādavaṅge rasasid'dhi rasasid'dhiyādavaṅge dēhaśud'dhi dēhaśud'dhavilladavaṅge rasasid'dhiyāgadu; rōga parihāra[vāgadu] nōḍā, kapilasid'dhamallikārjunā.