•  
  •  
  •  
  •  
Index   ವಚನ - 1830    Search  
 
ಭಕ್ತನಾದಡೇನು, ಮಹೇಶನಾದಡೇನು? ಮೊದಲಲ್ಲಿ ಶಕ್ತಿಯ ಜಪವೆ ಜಪ ನೋಡಾ. ಭಕ್ತನಾದಡೇನು, ಮಹೇಶನಾದಡೇನು? ಕಡೆಯಲ್ಲಿ ಶಿವನ ಜಪವೆ ಜಪ ನೋಡಾ. ಜಪ ರೀತಿ, ಜಪ ಲಕ್ಷಣ, ಜಪ ಪ್ರಣವಂಗಳರಿಯದೆ, ತಾಪತ್ರಯಕ್ಕೊಳಗಾಗಿ ಭವಕ್ಕೀಡಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhaktanādaḍēnu, mahēśanādaḍēnu? Modalalli śaktiya japave japa nōḍā. Bhaktanādaḍēnu, mahēśanādaḍēnu? Kaḍeyalli śivana japave japa nōḍā. Japa rīti, japa lakṣaṇa, japa praṇavaṅgaḷariyade, tāpatrayakkoḷagāgi bhavakkīḍādaru nōḍā, kapilasid'dhamallikārjunā.