ವಚನ - 1898     
 
ಘಟವೆಂಬುದು ದಿಟವಲ್ಲ ನೋಡಾ, ಕೇದಾರಯ್ಯಾ. ಪಟವೆಂಬುದು ದಿಟವಲ್ಲ ನೋಡಾ, ಕಲ್ಲಯ್ಯಾ. ಮಾಡಿದ ಘಟ, ನೆಯ್ದ ವಸ್ತ್ರಪಟ ಕಡೆ ಕಾಣಬಲ್ಲಡೆ, ಲಯವೆಂಬುದೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನ ಸಾನ್ನಿಧ್ಯದಲ್ಲಿ?