ವಚನ - 229     
 
ತಾಯ ತೊರೆದು ನಾನೇನ ಮಾಡುವೆ? ತಂದೆಯ ತೊರೆದು ನಾನೇನ ಮಾಡುವೆ? ಎತ್ತ ಮುಂತಾಗಿ ನಡೆದು ನಾನೇನ ಮಾಡುವೆ? ಚೆನ್ನಮಲ್ಲಿಕಾರ್ಜುನಾ ನೀನೊಲಿಯದನ್ನಕ್ಕರ?