ವಚನ - 230     
 
ತುಂಬಿದುದು ತುಳುಕದು ನೋಡಾ. ನಂಬಿದುದು ಸಂದೇಹಿಸದು ನೋಡಾ. ಒಲಿದುದು ಓಸರಿಸದು ನೋಡಾ. ನೆರೆದುದು ಮರೆಯದು ನೋಡಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ.