Index   ವಚನ - 32    Search  
 
ಸುರಾಭಾಂಡಕ್ಕೆ ಹೊರಗೆ ವಿಭೂತಿಯ ಹೂಸಿದಡೊಳಗು ಶುದ್ಧವಾಗಬಲ್ಲುದೆ? ಗುರುಕಾರುಣ್ಯ ನೆಲೆಗೊಂಡು, ಗುರುಲಿಂಗಜಂಗಮ ತ್ರಿವಿಧವೊಂದೆಂದು ಕಾಣದನ್ನಕ್ಕ ಕೂಡಲಚೆನ್ನಸಂಗಮದೇವರಲ್ಲಿ ಸದಾಚಾರವೆಲ್ಲರಿಗೆ ಸೂರೆಯೆ?