Index   ವಚನ - 103    Search  
 
ಉಭಯಲಿಂಗಪ್ರಸಾದದುದಯವ ಲಿಂಗಪ್ರಸಾದಿಗಳೆ ಬಲ್ಲರು, ನಾನೆತ್ತ ಬಲ್ಲೆನಯ್ಯಾ ದೇವಾ! ಕ್ರೀಯೆ ಮೀರಿದ ಸಂಬಂಧವನು, ವಿಧಿ ನಿಷೇಧ ಕ್ರಿಯೆಗೆ ಹೊರಗಾದುದನು, ಲಿಂಗಪ್ರಸಾದಿಗಳೆ ಬಲ್ಲರು, ನಾನೆತ್ತ ಬಲ್ಲೆನಯ್ಯಾ ದೇವಾ! ಶ್ರುತಿ ಸ್ಮೃತಿ ಪುರಾಣದೊಳಗಲ್ಲ, ಕೂಡಲಚೆನ್ನಸಂಗನ ಪ್ರಸಾದ.