Index   ವಚನ - 115    Search  
 
ಲಿಂಗದಿಂದೊದವಿದ ಜಂಗಮ, ಜಂಗಮದಿಂದೊದವಿದ ಲಿಂಗವು ಉಪಮೆಗೆ ತಂದು ಎರಡೆನಬಹುದೆ ಮಹಾಘನವ? ಜಂಗಮ ಸಜ್ಜನ ಸಹಜ ಶಿವೈಕ್ಯನನೇನೆಂದುಪಮಿಸಬಹುದು ಹೇಳಾ? ಕೂಡಲಚೆನ್ನಸಂಗಮದೇವಾ ಜಂಗಮಪ್ರಾಣಿ ಬಸವರಾಜನು.