Index   ವಚನ - 261    Search  
 
ತನುಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು, ಮನಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಸ್ಪರುಶನ ಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು, ಕೂಡಲಚೆನ್ನಸಂಗಮನಲ್ಲಿ ಪ್ರಸಾದಿಯಾದಡೆ. ಇಂತಾಗಬೇಕಯ್ಯ ಇಂತಲ್ಲದವರು ಬರುಕಾಯರೆನಿಸುವರು.