ಗುರುಶಿಷ್ಯ ಸಂಬಂಧವನರಸುವ
ಮಹಂತರ ನಾನೇನೆಂಬೆನಯ್ಯಾ;
ಶಿಷ್ಯಂಗೆ ಗುರು ಶಿವಸೋದರ,
ಗುರುವಿಂಗೆ ಲಿಂಗ ಶಿವಸೋದರ,
ಲಿಂಗಕ್ಕೆ ಜಂಗಮ ಶಿವಸೋದರ,
[ಜಂಗಮಕ್ಕೆ ಪ್ರಸಾದ ಶಿವಸೋದರ]
ಪ್ರಸಾದಕ್ಕೆ ಪರಿಣಾಮವೆ ಶಿವಸೋದರ,
ಇದು ಕಾರಣ, ಗುರುವಿನಲ್ಲಿ ಗುಣವ, ಲಿಂಗದಲ್ಲಿ ಶಿಲೆಯ
ಜಂಗಮದಲ್ಲಿ ಕುಲವ, ಪ್ರಸಾದದಲ್ಲಿ ರುಚಿಯ,
ಪರಿಣಾಮದಲ್ಲಿ ಕುರುಹನರಸುವ ಪಾತಕರ ತೋರದಿರು
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Guruśiṣya sambandhavanarasuva
mahantara nānēnembenayyā;
śiṣyaṅge guru śivasōdara,
guruviṅge liṅga śivasōdara,
liṅgakke jaṅgama śivasōdara,
[jaṅgamakke prasāda śivasōdara]
prasādakke pariṇāmave śivasōdara,
idu kāraṇa, guruvinalli guṇava, liṅgadalli śileya
jaṅgamadalli kulava, prasādadalli ruciya,
pariṇāmadalli kuruhanarasuva pātakara tōradiru
kūḍalacennasaṅgamadēvā.