Index   ವಚನ - 539    Search  
 
ಆನೆಂಬುದಿಲ್ಲಯ್ಯ, ಲಿಂಗವೆಂಬ ಮಹಂತಂಗೆ, ಅಳಿಯನು ಉಳಿಯನು, ಮಿಂಚಿನ ಗೊಂಚಲಂತೆ ಮುಂದೆ ರೂಪಾಗಿ ತೋರುತಿಪ್ಪನು. ಶರಣನೊಡಲುಗೊಂಡಡೆ ಸಾಮಾನ್ಯನೆ? ಪ್ರಕೃತಿ ಗುಣಭಿನ್ನಭಾವವಿಲ್ಲ. ಕೂಡಲಚೆನ್ನಸಂಗನ ಶರಣರ ಪರಿ ಬೇರೆ.