ಪ್ರಾಣಲಿಂಗವೆಂದೆಂಬರು,
ಪ್ರಾಣನಲ್ಲಿ ಹರಿವ ಪ್ರಕೃತ್ಯಾದಿಗಳಿಗಿನ್ನೆಂತೋ,
ಪ್ರಾಣನ, ಪರಮವಾರೂಢನ
ನಿರ್ವಾಣದಲ್ಲಿದ್ದಾತನೆ ಬಲ್ಲ,
ಪ್ರಾಣಲಿಂಗವಾದಾತನ ನಿಲವುಯೆಂತಿದ್ದಹುದೆಂದರೆ:
ನೆಯಿ ಹತ್ತದ ನಾಲಗೆಯಂತೆ,
ಕಾಡಿಗೆ ಹತ್ತದಾಲಿಯಂತೆ,
ದೂಳು ತಾಗದ ಗಾಳಿಯಂತೆ,
ಜಲ ಹತ್ತದ ಜಲಜದಂತೆ,
ಉಷ್ಣತಾಗದಗ್ನಿಯಂತಿಪ್ಪ,
ಕೂಡಲಚೆನ್ನಸಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Prāṇaliṅgavendembaru,
prāṇanalli hariva prakr̥tyādigaḷiginnentō,
prāṇana, paramavārūḍhana
nirvāṇadalliddātane balla,
prāṇaliṅgavādātana nilavuyentiddahudendare:
Neyi hattada nālageyante,
kāḍige hattadāliyante,
dūḷu tāgada gāḷiyante,
jala hattada jalajadante,
uṣṇatāgadagniyantippa,
kūḍalacennasaṅgā nim'ma śaraṇa.