Index   ವಚನ - 548    Search  
 
ಅನಾಯಾಸದಿಂದ ಮನೆಯ ಮಾಡಿ, ನಿರಾಯಾಸದಿಂದ ಪರಮಸುಖಿ, ರೂಪಿಸುವಲ್ಲಿ ರೂಪಾಧಿಕ, ನೋಡುವಲ್ಲಿ ನೋಟ ಘನ, ಇಂಥಾ ಸಹಜಸಂಗಿಯ ನಿಲವಿನ ಪರಿ. ಉದಕದೊಳಗಣ ಬಿಂದು ಉದಯರತ್ನದಂತೆ ಕೂಡಲಚೆನ್ನಸಂಗಾ ನಿಮ್ಮ ಶರಣರ ನಿಲವು.