Index   ವಚನ - 635    Search  
 
ಅರ್ಪಿತವನರ್ಪಿತವೆಂಬ ಸಂದೇಹವಳಿದುಳಿದ ಪ್ರಸಾದಿಗೆ. ಅರ್ಪಿತ ಪ್ರಸಾದಕ್ಕೆಲ್ಲಿಯದೊ? ಆ ಪ್ರಸಾದ ಅರ್ಪಿತಕ್ಕೆಲ್ಲಿಯದೊ? "ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಜ್ಜಂಗಮಾಯ ವೈ| ಜಂಗಮಾರ್ಪಿತಪ್ರಸಾದಂ ದದ್ಯಾತ್ತಂ ಲಿಂಗ ಮೂರ್ತಯೇ"|| ಮಹದಿಂದಾದ ಸುಖವ ಸೂತಕಕ್ಕಿಕ್ಕುವ ಪಾತಕರನೇನೆಂಬೆ, ಕೂಡಲಚೆನ್ನಸಂಗಯ್ಯಾ.