ವಚನ - 307     
 
ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ? ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು. ಒಂದೂರಭಾಷೆಯೊಂದೂರಲಿಲ್ಲ. ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ. ಇಂತೀ ಊರ ಹೊಕ್ಕ ತಪ್ಪಿಂಗೆ ಕಾಯವ ಭೂಮಿಗೆ ಸುಂಕವ ತೆತ್ತು ಜೀವವನುಳುಹಿಕೊಂಡು ಬರಬೇಕಾಯಿತ್ತು. ಇಂತೀ ಮಹಾಘನದ ಬೆಳಕಿನೊಳಗೆ ಕಳೆದುಳಿದು ಸುಳಿದಾಡಿ ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.