Index   ವಚನ - 1027    Search  
 
ಆ ಲಿಂಗವೆ ಅಮಳೋಕ್ಯವಾದ ಬಳಿಕ, ಆ ಲಿಂಗವೆ ಮುಖಸೆಜ್ಜೆಯಾದ ಬಳಿಕ, ಆ ಲಿಂಗವೆ ಭುಜಂಗ ನಾಗವಟ್ಟಿಗೆಯಾದ ಬಳಿಕ, ಆ ಮಹಿಮನೆ ಪ್ರಾಣನಾಥನಾದ ಬಳಿಕ, ಇದಿರಿಟ್ಟು ಕೇಳಲುಂಟೆ? ಅಂಗಲಿಂಗಿಸಂಬಂಧಿ ಶಿವಶರಣರ ಅಂಘ್ರಿಯಲ್ಲಿ ಇರಿಸಾ ಎನ್ನ, ಕೂಡಲಚೆನ್ನಸಂಗಮದೇವಾ.