Index   ವಚನ - 338    Search  
 
ಮುನ್ನ ಮಾಡಿತ್ತನಾರು ಕಳೆಯಬಾರದು. ಅದು ಬೆನ್ನ ಹಿಂದೆ ಬರುತ್ತಿಪ್ಪುದು. ಅದನಿನ್ನು ಕಳದೆಹೆನೆಂದಡೆ ಎನ್ನಿಚ್ಚೆಯುಂಟೆ ಅಯ್ಯಾ? ಚೆನ್ನಮಲ್ಲಿಕಾರ್ಜುನನೆನಗೆ ಕಟ್ಟಿದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವೆನು.