Index   ವಚನ - 1046    Search  
 
ಉಟ್ಟುದನಳಿದು ಬತ್ತಲೆಯಿದ್ದಡೇನು? ಆಶನವರತು ವ್ಯಸನ ನಿಂದು ವ್ಯಾಪ್ತಿಗಳು ತಲ್ಲೀಯವಾಗಿದ್ದಡೇನು? ಮುಟ್ಟಬಾರದ ಠಾವ ಮರೆಗೊಂಡಿಪ್ಪನು, ಕೂಡಲಚೆನ್ನಸಂಗಮದೇವನು.