ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ,
ಕರ್ಮವಿಲ್ಲಾಗಿ ಜನನವಿಲ್ಲ,
ಜನನವಿಲ್ಲಾಗಿ ಭೂತಾದಿ
ಚರಿತ್ರ ಕರಣಾದಿ ಗುಣಂಗಳು ಮುನ್ನವೆ ಇಲ್ಲ.
ಹಿಂದಣ ಜನನವಿಲ್ಲ, ಇಂದಿನ ಸ್ಥಿತಿಯಿಲ್ಲ,
ಮುಂದಣ ಲಯವಿಲ್ಲ,
ಆದಿ ಮಧ್ಯ ಅವಸಾನವಿಲ್ಲ,
ಬಿಚ್ಚಿ ಬೇರಿಲ್ಲ, ಬೆರಸಿ ಒಂದಿಲ್ಲ.
ಉಪಮಾತೀತ ಕೂಡಲಚೆನ್ನಸಂಗಾ,
ನಿಮ್ಮ ಶರಣನು.
Art
Manuscript
Music
Courtesy:
Transliteration
Udakadante? Kartr̥villāgi karmavilla,
karmavillāgi jananavilla,
jananavillāgi bhūtādi
caritra karaṇādi guṇaṅgaḷu munnave illa.
Hindaṇa jananavilla, indina sthitiyilla,
mundaṇa layavilla,
ādi madhya avasānavilla,
bicci bērilla, berasi ondilla.
Upamātīta kūḍalacennasaṅgā,
nim'ma śaraṇanu.