Index   ವಚನ - 1099    Search  
 
ಓಂ' ಎಂಬಕ್ಷರವೆ ರಸ, `ನ' ಎಂಬಕ್ಷರವೆ ರುಧಿರ, `ಮ' ಎಂಬಕ್ಷರವೆ ಮಾಂಸ, `ಶಿ' ಎಂಬಕ್ಷರವೆ ಮೇಧಸ್ಸು, `ವಾʼ ಎಂಬಕ್ಷರವೆ ಅಸ್ಥಿ, `ಯ' ಎಂಬಕ್ಷರವೆ ಮಜ್ಜೆ. ಷಡಕ್ಷರದಿಂದ ಶುಕ್ಲ ಶೋಣಿತ- ಇಂತೀ ಸರ್ವೆಂದ್ರಿಯಂಗಳುತ್ಪತ್ತಿ, ಕೂಡಲಚೆನ್ನಸಂಗಮದೇವಾ.