ವಚನ - 360     
 
ವನವೆಲ್ಲಾ ಕಲ್ಪತರು, ಗಿಡವೆಲ್ಲಾ ಮರುಜವಣಿ, ಶಿಲೆಗಳೆಲ್ಲಾ ಪರುಷ, ನೆಲನೆಲ್ಲಾ ಅವಿಮುಕ್ತಿಕ್ಷೇತ್ರ. ಜಲವೆಲ್ಲಾ ನಿರ್ಜರಾಮೃತ, ಮೃಗವೆಲ್ಲಾ ಪುರುಷಾಮೃಗ, ಎಡಹುವ ಹರಳೆಲ್ಲಾ ಚಿಂತಾಮಣಿ. ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ, ನೋಡುತ್ತ ಬಂದು ಕದಳಿಯ ಬನವ ಕಂಡೆ ನಾನು.