Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1257 
Search
 
ಜಿತಪ್ರಸಾದ [ಅ]ಸಮಾಕ್ಷವಾದುದ ಅಶುದ್ಧಿತರೆತ್ತ ಬಲ್ಲರು? ಮಹಾಮುನಿಗಳೆತ್ತ ಬಲ್ಲರು? ಅನೇಕ ಕಾಲ ಮಹಾಕ್ಷೇತ್ರದಲ್ಲಿ ನಿಜನಿವಾಸಿಯಾಗಿರ್ದನು ನಮ್ಮ ಮಡಿವಳನು. ಆ ಮಡಿವಳನ ಧ್ಯಾನದಲ್ಲಿ ಆರೂಢನಾಗಿರ್ದನು ನಮ್ಮ ಬಸವಣ್ಣನು. ಆ ಬಸವಣ್ಣನು ಬಪ್ಪಲ್ಲಿ ಮೈಯೆಲ್ಲ ಕಣ್ಣಾಗಿ, ಉತ್ತಮಾಂಗವೆಲ್ಲ ಕಣ್ಣಾಗಿ, ರೋಮ ರೋಮಾದಿಗಳೆಲ್ಲ ಕಣ್ಣಾಗಿ ಬಂದನಯ್ಯಾ, ಆ ಬಸವಣ್ಣನ ಭಕ್ತಿಯ ಜಡವ ಹರಿಯ ಬಂದನಯ್ಯಾ ನಮ್ಮ ಮಡಿವಾಳಯ್ಯನು. ಇವರಿಬ್ಬರ ನಿತ್ಯಪ್ರಸಾದಿ ನಾನಾದೆನು, ಕೂಡಲಚೆನ್ನಸಂಗಮದೇವಾ.
Art
Manuscript
Music
Your browser does not support the audio tag.
Courtesy:
Video
Transliteration
Jitaprasāda [a]samākṣavāduda aśud'dhitaretta ballaru? Mahāmunigaḷetta ballaru? Anēka kāla mahākṣētradalli nijanivāsiyāgirdanu nam'ma maḍivaḷanu. Ā maḍivaḷana dhyānadalli ārūḍhanāgirdanu nam'ma basavaṇṇanu. Ā basavaṇṇanu bappalli maiyella kaṇṇāgi, uttamāṅgavella kaṇṇāgi, rōma rōmādigaḷella kaṇṇāgi bandanayyā, ā basavaṇṇana bhaktiya jaḍava hariya bandanayyā nam'ma maḍivāḷayyanu. Ivaribbara nityaprasādi nānādenu, kūḍalacennasaṅgamadēvā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: