Index   ವಚನ - 1367    Search  
 
ಪರಂಜ್ಯೋತಿಯಪ್ಪ ಮಹಾಲಿಂಗವ ಮರೆದು, ಜಡತನುವಾನೆಂಬ ಆಣವವೈರಿಯ ಗೆಲುವಡೆ ಚಿತ್‌ಸ್ವರೂಪಿ ಶ್ರೀಜಂಗಮಪಾದವನೊಡನೆ ಪಿಡಿವುದಯ್ಯಾ. ಚಿತ್ ಕೈಲಾಸವನೈದುವಡೆ ಜಂಗಮಪಾದವೆ ಮಹಾದ್ವಾರವಾಗಿಪ್ಪುದಯ್ಯಾ. ಆ ಜಂಗಮಪಾದವೆ ಭವಜಲಧಿಗೆ ಹಡಗವಾಗಿಪ್ಪುದಯ್ಯಾ. 'ಅರಾತಿಂ ತರೇಮ ಶಿವಲೋಕಸ್ಯ ದ್ವಾರಂ...' ಎಂದುದಾಗಿ ಕೂಡಲಚೆನ್ನಸಂಗಮದೇವಾ ಇಂತಪ್ಪ ಪಾದವಿಡಿದು ಪವಿತ್ರರಾದ ಸದ್ಭಕ್ತರ ಸಂಗಮವನೆನಗೆ ಕರುಣಿಸು.