Index   ವಚನ - 1368    Search  
 
ಪರತರಶಿವಲಿಂಗವೆ ಗುರುಲಿಂಗಜಂಗಮವಾಗಿ ಧರೆಯ ನರರನುದ್ಧರಿಸುತಿಪ್ಪುದು ಕಾಣಿರೊ, ಅದೆಂತೆಂದಡೆ: ಅಜ್ಞಾನವೆಂಬ ಕತ್ತಲೆಯ ಕಳೆವಡೆ ಗುರುಲಿಂಗ ಕಾರಣವಾಗಿಪ್ಪುದು ಕಾಣಿರೊ. ಒಳಹೊರಗಿನ ನೋಟಮಾಟದ ತಿಳಿವಿನ ಬಳಗಕ್ಕೆಲ್ಲ ಶಿವಲಿಂಗವೆ ಕಾರಣವಾಗಿಪ್ಪುದು ಕಾಣಿರೊ. 'ಜ್ಯೋತಿಷ್ಮದ್ಭಾಜಮಾನಂ ಮಹಸ್ವತ್' ಎಂದು ಕೂಡಲಚೆನ್ನಸಂಗಮದೇವನ ವಚನವಿಪ್ಪುದಾಗಿ ಗುರುಲಿಂಗಜಂಗಮದ ಪಾದೋದಕವೆಂಬಮೃತವ ಸೇವಿಸಿ ನಮ್ಮ ಶರಣರು ಜರಾಮರಣರಹಿತರೆನಿಸಿ ನಿತ್ಯಮುಕ್ತರಾದರು.