Index   ವಚನ - 1381    Search  
 
ಪಶುಪತಿಜ್ಞಾನವಲ್ಲದ ಮಾತನಾಡಲಾಗದು. ಉತ್ಪತ್ತಿ-ಸ್ಥಿತಿ-ಲಯವೆಂಬ ಕಾಲತ್ರಯದಲ್ಲಿ ಬೀಳದೆ, ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ ತಾಪತ್ರಯಕ್ಕೊಳಗಾಗದೆ, ಪುತ್ರೇಷಣ, ಅರ್ಥೇಷಣ, ದಾರೇಷಣವೆಂಬ ಈಷಣತ್ರಯದ ಭಾವ ಬೆಳೆಯದೆ ಅಭಾವ-ಸ್ವಭಾವ-ನಿರ್ಭಾವವೆಂಬ ಶುದ್ದವಾಗಿ ದೀಕ್ಷೆ ಶಿಕ್ಷೆ ಸ್ವಾನುಭವವೆಂಬ ದೀಕ್ಷಾತ್ರಯದ ಅನುಮಾನವರತು, ಇಷ್ಟ-ಪ್ರಾಣ-ತೃಪ್ತಿಗಳೆಂಬ ಲಿಂಗತ್ರಯದ ಭೇದವ ಭೇದಿಸಿ, ಸ್ವರ್ಗ-ಮರ್ತ್ಯ-ಪಾತಾಳಲೋಕವನತಿಗಳೆದು, ಇಹ-ಪರ-ಸ್ವಯವೆಂಬ ಮುಕ್ತಿತ್ರಯದ ಹಂಗು ಹಿಂಗಿ. ಮದನ ನಿರ್ಮದನ ಸನ್ಮದನವೆಂಬ ಮದನತ್ರಯದಲ್ಲಿ ನಿರಾತಂಕವಾಗಿ...