•  
  •  
  •  
  •  
Index   ವಚನ - 200    Search  
 
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಸೋಂಕೆಂಬಿವು ಷಡುಸ್ಥಲದ, ಬಹಿರಂಗದ ಲಾಂಛನವಯ್ಯಾ. ಅಂತರಂಗದಲ್ಲಿ ನಾಲ್ಕು ಸ್ಥಲ; ಅವಾವುವೆಂದಡೆ, ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ, ಇಂತೀ ಸ್ಥಾನಂಗಳನರಿಯರಾಗಿ! ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ, ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ, ಅಷ್ಟದಳಕಮಲದಲ್ಲಿ ಸ್ವಾನುಭಾವ ಸ್ವಾಯತ. ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು ಸದಾ ಸನ್ನಿಹಿತರು.
Transliteration Kakṣe karasthala kaṇṭha uttamāṅga mukhasejje aṅgasōṅkembivu ṣaḍusthalada, bahiraṅgada lān̄chanavayyā. Antaraṅgadalli nālku sthala; avāvuvendaḍe, brahmarandhra bhrūmadhya nāśikāgra caukamadhya, intī sthānaṅgaḷanariyarāgi! Brahmarandhradalli liṅgasvāyata, bhrūmadhyadalli jaṅgamasvāyata, nāśikāgradalli prasādasvāyata, caukamadhyadalli anubhāvasvāyata, aṣṭadaḷakamaladalli svānubhāva svāyata. Idu kāraṇa, guhēśvarā nim'ma śaraṇaru sadā sannihitaru.
Hindi Translation कक्षा, करस्थल, कंठ, उत्तमांग, सुखसज्जा, छाती ये षट्स्थल – दर्शनादि केलिए बहिरंग में वेष लांछन है। अंतरंग में चार स्थल; ब्रह्मर्ंध्र, भ्रूमध्य, नासिकाग्र, चौकमध्य - ऐसे स्थानों को जाने तो ब्रह्मरंध्र में लिंगस्वायत, भ्रूमध्य में जंगम स्वायत, नासिकाग्र में प्रसाद स्वायत, चौक मध्य में अनुभाव स्वायत, अष्टदल कमल में सर्वस्वायत। इसकारण से गुहेश्वरा, तुम्हारे शरण सदा सन्निहित है। Translated by: Eswara Sharma M and Govindarao B N
Tamil Translation கட்கம், கரத்தலம், கழுத்து, தலை, நெற்றி, மார்பு என்னுமிவை ஆறுதலதரிசனருக்கு புறத்திலுள்ள அடையாளங்கள் ஐயனே. அகத்திலே நான்கு தலமாம். பிரம்மரந்திரம், புருவநடுப்பகுதி, மூக்கின்துதி ஆதாரசக்கரம் எனும் நான்கு தலங்களை அறியார், பிரம்மரந்திரத்தில் இலிங்கம் புருவநடுவில் ஜங்கமலிங்கம் மூக்கின் துதியில் பிரசாதலிங்கம், ஆதார நடுவில் அனுபாவலிங்கம், எண்தள கமலத்தில் பிராணலிங்கத்தையும் கண்டறிவர், எனவே குஹேசுவரனே, அகத்திலே உம் அடியார் இடையறாது இலிங்கத்துடனுறைவர். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗಸೋಂಕು = ಎದೆ; ಉತ್ತಮಾಂಗ = ಶಿರಸ್ಸು; ಕಂಠ = ಕುತ್ತಿಗೆ; ಕಕ್ಷೆ = ಕಂಕುಳ, ಬಗಲು; ಕರಸ್ಥಲ = ಕೈ; ದರ್ಶನಾದಿಗಳಿಗೆ = ಕಣ್ಣಿಗೆ ಕಾಣಲೆಂದು ; ಬಹಿರಂಗದಲ್ಲಿ = ಹೊರಗೆ; ಮುಖಸೆಜ್ಜೆ = ಮುಖವಿವರ, ಲಲಾಟ; ವೇಷಲಾಂಛನ = ಹೊರಗಿನ ಲಿಂಗಧಾರಣೆ; ಸನ್ನಿಹಿತರು = ಸದಾ ಲಿಂಗಸಂಗಿಗಳು, ಅಂತರಂಗದಲ್ಲಿ; ಸ್ವಾಯತ = ಆಂತರಿಕ ಧಾರಣೆ(ಆಯತ ಎಂದರೆ ಬಾಹ್ಯಧಾರಣೆ); Written by: Sri Siddeswara Swamiji, Vijayapura